2020ರ ಜಾಗ್ವಾರ್ ಎಫ್-ಟೈಪ್ ಫೇಸ್‌ಲಿಫ್ಟ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. 2020ರ ಎಫ್-ಟೈಪ್ ಕಾರ್ ಅನ್ನು ಕೂಪೆ ಹಾಗೂ ಕನ್ವರ್ಟಿಬಲ್ ಮಾದರಿಗಳಾಗಿ
ಮಾರಾಟ ಮಾಡಲಾಗುವುದು. ಈ ಕಾರಿನ ಆರಂಭಿಕ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.95.12 ಲಕ್ಷಗಳಾಗಿದೆ.

ಟಾಪ್ ಮಾದರಿಯಾದ ಎಫ್-ಟೈಪ್ ಕನ್ವರ್ಟಿಬಲ್ ಆರ್ ಪಿ 575 ಕಾರು 5.0-ಲೀಟರ್ ಸೂಪರ್‌ಚಾರ್ಜ್ದ್ ವಿ8 ಎಂಜಿನ್ ಹೊಂದಿದೆ. ಈ ಮಾದರಿಯ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ
ರೂ.2.42 ಕೋಟಿಗಳಾಗಿದೆ.
2020ರ ಜಾಗ್ವಾರ್ ಎಫ್-ಟೈಪ್ ಕಾರಿನಲ್ಲಿ ಮಿಡ್-ಸೈಕಲ್ ಅಪ್‌ಡೇಟ್‌ಗಳನ್ನು ಮಾಡಲಾಗಿದೆ. ಈ ಕಾರಿನ ಮುಂಭಾಗದಲ್ಲಿರುವ ಫಾಸ್ಕಿಯಾ ಹಾಗೂ ಇಂಟಿರಿಯರ್‌ಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.

2020ರ ಜಾಗ್ವಾರ್ ಎಫ್-ಟೈಪ್ ಕಾರಿನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ವೀಡಿಯೊ ನೋಡಿ.